ಬೆಂಗಳೂರು (17-11-2023): 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರು(6 ರಿಂದ 8ನೇ ತರಗತಿ)ಹುದ್ದೆಗೆ ಆಯ್ಕೆಯಾಗಿ ಉಪನಿರ್ದೇಶಕರ ಕಛೇರಿಯನ್ನು ಆಯ್ಕೆ ಮಾಡಿಕೊಂಡು ವರದಿ ಮಾಡಿಕೊಂಡಿರುವ ಶಿಕ್ಷಕರುಗಳಿಗೆ ಶಾಲೆಗೆ ನಿಯೋಜನೆಗೊಳಿಸುವ ಬಗ್ಗೆ ಜ್ಞಾಪನ. ಕೆಲವೊಂದು ಜಿಲ್ಲೆಗಳಲ್ಲಿ ‘ಸಿ’ ವಲಯದಲ್ಲಿ ಖಾಲಿ ಹುದ್ದೆಗಳು ಲಭ್ಯವಿಲ್ಲದ ಪ್ರಯುಕ್ತ ಅಂತಹ ಶಿಕ್ಷಕರುಗಳಿಗೆ ಆಯಾ ವ್ಯಾಪ್ತಿಯ ಉಪನಿರ್ದೇಶಕರ ಕಛೇರಿ (ಆಡಳಿತ) ಡಯಟ್ ಕಛೇರಿಯನ್ನು ಕೌನ್ಸಿಲಿಂಗ್‌ನಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು, ಅದರಂತೆ ಆಯ್ಕೆ ಮಾಡಿಕೊಂಡಿರುವ ಶಿಕ್ಷಕರುಗಳು ಉಪನಿರ್ದೇಶಕರ ಕಛೇರಿ (ಆಡಳಿತ)ಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಶಿಕ್ಷಕರನ್ನು ತಕ್ಷಣವೇ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿನ ಖಾಲಿ ಹುದ್ದೆಗಳಿರುವ ಹಿರಿಯ ಪ್ರಾಥಮಿಕ ಶಾಲೆಗಳಿಗೆ ನಿಯೋಜಿಸುವಂತೆ ಜ್ಞಾಪನದಲ್ಲಿ ತಿಳಿಸಲಾಗಿದೆ.
ಜ್ಞಾಪನವನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ