Sarkari Noukararu

ಪುರುಷ ನೌಕರರಿಗೆ ಶಿಶುಪಾಲನಾ ರಜೆ ಸೌಲಭ್ಯದ ಬಗ್ಗೆ

ಬೆಂಗಳೂರು (12-11-2023): ಒಂಟಿ ಪೋಷಕರಾಗಿರುವ ವಿವಾಹ ವಿಚ್ಛೇದಿತ, ವಿಧುರ ಪುರುಷ ರಾಜ್ಯ ಸರ್ಕಾರಿ ನೌಕರರಿಗೂ ಮಕ್ಕಳ ಆರೈಕೆಗಾಗಿ ಶಿಶುಪಾಲನಾ ರಜೆಯ ಅವಶ್ಯಕತೆ ಇರುತ್ತದೆ. ಶಿಶುಪಾಲನಾ ರಜೆಯ ಸೌಲಭ್ಯವನ್ನು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರ ವಿಸ್ತರಿಸಿದ್ದಾಗ್ಯೂ ಏಕಪೋಷಕರಾಗಿರುವ ಪುರುಷ, ಸರ್ಕಾರಿ ನೌಕರರಿಗೂ ಈ ಸೌಲಭ್ಯವನ್ನು ವಿಸ್ತರಿಸುವುದು ನ್ಯಾಯಸಮ್ಮತವಾಗುವುದನ್ನು ಪರಿಗಣಿಸಿ ಸರ್ಕಾರ ಶಿಶುಪಾಲನಾ ರಜೆಯ ಸೌಲಭ್ಯವನ್ನು ಕೆಲವು ಷರತ್ತುಗಳಿಗೊಳಪಟ್ಟು ಒಂಟಿ ಪೋಷಕರಾಗಿರುವ (single male parent) ಅವಿವಾಹಿತ/ವಿವಾಹ-ವಿಚ್ಛೇದಿತ/ವಿಧುರ ಸರ್ಕಾರಿ ಪುರುಷ ನೌಕರರಿಗೂ ರಜೆ ಸೌಲಭ್ಯಕ್ಕೆ ಆದೇಶಿಸಿದೆ.

ಶಿಶುಪಾಲನಾ ರಜೆಗೆ ಸಂಬಂಧಿಸಿದ ಆದೇಶವನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಒತ್ತಿ

Share This