Sarkari Noukararu

ಅಗ್ನಿಶಾಮಕ ಇಲಾಖೆ ಸಹಾಯಕ ಠಾಣಾಧಿಕಾರಿ ಹುದ್ದೆಗಳಿಗೆ ಪದೋನ್ನತಿ

ಬೆಂಗಳೂರು (27-05-2025): ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಮುಖ ಅಗ್ನಿಶಾಮಕ, ಅಗ್ನಿಶಾಮಕ ಚಾಲಕ ಮತ್ತು ಚಾಲಕ ತಂತ್ರಜ್ಞ ಹುದ್ದೆಗಳಿಂದ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಹುದ್ದೆಗೆ ಪದೋನ್ನತಿಯನ್ನು ನೀಡಿ ಸ್ಥಳ ನಿಯುಕ್ತಿಗೊಳಿಸುವ ಸಲುವಾಗಿ ಇಲಾಖಾ ಸಮಾಲೋಚನೆಗಾಗಿ (Counselling) ಆಯೋಜಿಸಿದ್ದು, ಈ ಕೆಳಗೆ ನಮೂದಿಸಿರುವ ಒಟ್ಟು 49 ಸಿಬ್ಬಂದಿಗಳು ದಿನಾಂಕ: 29-05-2025 ರಂದು ಪೂರ್ವಾಹ್ನ 10:00 ಗಂಟೆಗೆ ಸರಿಯಾಗಿ ಶುದ್ದ ಸಮವಸ್ತ್ರದೊಂದಿಗೆ ಮೆಡಲ್ ಧರಿಸಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕೇಂದ್ರ ಕಛೇರಿ, ಬೆಂಗಳೂರಿನಲ್ಲಿ ಹಾಜರಿರಲು ಸೂಚಿಸಲಾಗಿದೆ

49 ಜನ ಸಿಬ್ಬಂದಿಗಳ ಪಟ್ಟಿ ಸಿದ್ದವಿದ್ದು, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಲಿಂಕ್ ಮೇಲೆ ಒತ್ತಿ 👇

Share This